1) ಭಾರತದ ರಾಷ್ಟ್ರೀಯ ಹಾಡು ಯಾವುದು?
A). ವಂದೇ ಮಾತರಂ
B). ಜನಗಣಮನ
C). ಜೈ ಭಾರತ ಜನನಿಯ ತನುಜಾತೆ
D). ಇದು ಯಾವುದೂ ಅಲ್ಲ
Correct Ans: (A)
ವಂದೇ ಮಾತರಂ
ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ 1896 ರಲ್ಲಿ ಹಾಡಿದರು, ಅದೇ ವರ್ಷ ಕವಿ ರವೀಂದ್ರರು "ವಂದೇ ಮಾತರಂ" ಪೂರ್ಣ ಕವನವನ್ನು ಮಲ್ಲಾರ ರಾಗದಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಥಮವಾಗಿ ಹಾಡಿದರು.
2) ’ವಂದೇಮಾತರಂ’ ಹಾಡನ್ನು ಯಾವ ವರ್ಷದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸನ ಅಧಿವೇಶನದಲ್ಲಿ ಮೊದಲು ಹಾಡಲಾಗಿತ್ತು?
A). 1896
B). 1890
C). 1887
D). 1898
Correct Ans: (A)
1896
"ವಂದೇಮಾತರಂ" ಕವನವನ್ನು 1882 ರಲ್ಲಿ ರಚಿಸಲಾಯಿತು, ಇದನ್ನು ಬಂಕಿಮರ ಆನಂದ ಮಠ ಎಂಬ ಕಾದಂಬರಿಯಿಂದ ಆರಿಸಲಾಗಿದೆ. ಬಾಲು ಹೇಮಚಂದ್ರರು ತಮ್ಮ "ರಾಖೀ ಬಂಧನ" ಎಂಬ ಗೀತೆಯಲ್ಲಿ "ವಂದೇಮಾತರಂ"ನ ಕೆಲವು ಸಾಲುಗಳನ್ನು ಸೇರಿಸಿಕೊಂಡು ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ 1896 ರಲ್ಲಿ ಹಾಡಿದರು.
3) ವಂದೇ ಮಾತರಂ ಹಾಡನ್ನು 1882 ರಲ್ಲಿ ಪ್ರಕಟವಾದ ಬಂಕಿಮ ಚಂದ್ರ ಚಟರ್ಜಿಯವರ ಯಾವ ಕೃತಿಯಿಂದ ಆರಿಸಲಾಗಿದೆ?
A). ಕಪಾಲ ಕುಂಡಲ
B). ವಿಷವೃಕ್ಷ
C). ಆನಂದಮಠ
D). ಇದು ಯಾವುದೂ ಅಲ್ಲ
Correct Ans: (C)
ಆನಂದಮಠ
ವಂದೇ ಮಾತರಂ ಕವಿತೆಯನ್ನು ಭಾರತದ ರಾಷ್ಟ್ರ ಕವಿತೆ ಅಥವಾ ಹಾಡು ಎಂದು ಕರೆಯಲಾಗುತ್ತದೆ. ಈ ವಂದೇ ಮಾತರಂ ಕವಿತೆಯು ಸಂಸ್ಕೃತದಲ್ಲಿ ಪಶ್ಚಿಮ ಬಂಗಾಳದ ಪ್ರಮುಖ ಕವಿ ’ಬಂಕಿಮ್ ಚಂದ್ರ ಚಟರ್ಜಿ’ಯವರಿಂದ ರಚಿತವಾಗಿದೆ. ಬಂಕಿಮರು 1882 ರಲ್ಲಿ ಬರೆದ "ಆನಂದ ಮಠ" ಎಂಬ ಕೃತಿಯ ಭಾಗವಾಗಿದ್ದ ಈ ಗೀತೆ ಅತ್ಯಂತ ಜನಪ್ರಿಯತೆ ಗಳಿಸಿತು. ಈ ಕವಿತೆಯು ಇತಿಹಾಸದ ಸ್ವಾತಂತ್ರ್ಯದ ಚಳುವಳಿಯ ಹೋರಾಟಕ್ಕೆ ತುಂಬಾ ಸ್ಪೂರ್ತಿಯ ಕವಿತೆಯಾಗಿತ್ತು. ಈ ಕವಿತೆಯು ಭಾರತದ ರಾಷ್ಟ್ರಗೀತೆಯಾದ ಜನಗಣ ಮನದೊಂದಿಗೆ ಸಮಾನವಾದ ಸ್ಥಾನವನ್ನು ಹೊಂದಿದೆ.
4) ಭಾರತದ ರಾಷ್ಟ್ರೀಯ ಹಾಡನ್ನು ಅಂಗೀಕರಿಸಿದ್ದು ಯಾವಾಗ?
A). ಆಗಸ್ಟ್ 15, 1947
B). ಜನವರಿ 24, 1950
C). ನವೆಂಬರ್ 26, 1949
D). ಇದು ಯಾವುದು ಅಲ್ಲ
Correct Ans: (B)
ಜನವರಿ 24, 1950
1950 ರಲ್ಲಿ ಜವರಿ 24ರಂದು "ವಂದೇ ಮಾತರಂ" ಮತ್ತು "ಜನಗಣಮನ" ಕವನಗಳ ಮೊದಲ ಭಾಗಗಳು ರಾಷ್ಟ್ರಗೀತೆಗಳಾಗಿ ಭಾರತ ಸರ್ಕಾರದಿಂದ ಆಯ್ಕೆ ಮಾಡಲ್ಪಟ್ಟವು.
5) ಭಾರತದ ರಾಷ್ಟ್ರೀಯ ಹಾಡನ್ನು ರಚಿಸಿದವರು ಯಾರು?
A). ರವೀಂದ್ರನಾಥ ಟ್ಯಾಗೂರ್
B). ಬಂಕಿಮಚಂದ್ರ ಚಟರ್ಜಿ
C). ಶರತ್ ಚಂದ್ರ ಚಟರ್ಜಿ
D). ಇವರು ಯಾರು ಅಲ್ಲ
Correct Ans: (B)
ಬಂಕಿಮಚಂದ್ರ ಚಟರ್ಜಿ
ಬಂಕಿಮ ಚಂದ್ರ ಚಟ್ಟೋಫಾದ್ಯಯವರ ಜನನ- 27 ಜೂನ್ 1838 ಮರಣ - 8 ಏಫ್ರೀಲ್ 1894 ಭಾರತದ ಓರ್ವ ಬಂಗಾಳಿ ಕವಿ,ಕಾದಂಬರಿಕಾರ, ಪ್ರಬಂಧಕಾರ ಮತ್ತು ಪತ್ರಕರ್ತರಾಗಿದ್ದರು.ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರೇರೇಪಿಸಿದ ವಂದೇ ಮಾತರಂ ಗೀತೆಯ ಕವಿಯಾಗಿ ಇವರು ಅತ್ಯಂತ ಪ್ರಸಿದ್ದರಾಗಿದ್ದರು. ಇದೇ ಗೀತೆಯ ನಂತರ ಭಾರತದ ರಾಷ್ಟೀಯ ಗೀತೆಯಾಗಿ ಘೋಷಿಸಲ್ಪಟ್ಟಿತು.
6) ರವೀಂದ್ರನಾಥ ಟ್ಯಾಗೋರ್ ಎಲ್ಲಿ ಜನಿಸಿದರು?
A). ಕಲ್ಕತ್ತ
B). ಮುಂಬೈ
C). ಪುಣೆ
D). ನಾಗಪುರ
Correct Ans: (A)
ಕಲ್ಕತ್ತ
ತಂದೆ: ದೇಬೇಂದ್ರನಾಥ ಟಾಗೋರ್ ಮತ್ತು
ತಾಯಿ: ಶಾರದಾ ದೇವಿ ದಂಪತಿಗಳಿಗೆ ಕೊಲ್ಕೊತ್ತದ ಜೊರಸಂಕೊ ಭವನದಲ್ಲಿ ರವೀಂದ್ರನಾಥ್‌ ಜನಿಸಿದರು. ಜನನ 7 ಮೇ 1861, ಕಲ್ಕತ್ತ
ಮರಣ 7 ಆಗಸ್ಟ್ 1941 (ತೀರಿದಾಗ ವಯಸ್ಸು 80) ಕಲ್ಕತ್ತ
ವೃತ್ತಿ ಕವಿ, ಬರಹಗಾರ, ತತ್ವಶಾಸ್ತ್ರಜ್ಞ, ಕಲಾವಿದ ಪ್ರಮುಖ ಪ್ರಶಸ್ತಿಗಳು ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ (1913)
7) 'ಜನಗಣಮನ’ದ ಹಾಡುವ ಅವಧಿ ಎಷ್ಟು ?
A). 1 ನಿಮಿಷ
B). 1 ನಿಮಿಷ 10 ಸೆಕೆಂಡುಗಳು
C). 45 ಸೆಕೆಂಡುಗಳು
D). 52 ಸೆಕೆಂಡುಗಳು
Correct Ans: (D)
52 ಸೆಕೆಂಡುಗಳು
ನೊಬೆಲ್ ಬಹುಮಾನಿತ ರವೀಂದ್ರನಾಥ ಠಾಗೂರರು ಬರೆದ "ಜನಗಣಮನ" ಎಂದು ಆರಂಭವಾಗುವ ಗೀತೆಯನ್ನು ರಾಷ್ಟ್ರಗೀತೆಯಾಗಿ ಆರಿಸಲಾಗಿದೆ. ಈ ಗೀತೆಯನ್ನು ಹಾಡುವ ಅವಧಿ 48-52 ಸೆಕೆಂಡುಗಳು.
8). "ಜನಗಣ ಮನ"ವನ್ನು ಮೊದಲ ಹಾಡಿದ್ದು ಯಾವಾಗ ?
A). 1911 ಡಿಸೆಂಬರ್ 27
B). 1912 ಮಾರ್ಚ 28
C). 1910 ನವೆಂಬರ್ 25
D). 1911 ಡಿಸೆಂಬರ್ 25
Correct Ans: (A)
1911 ಡಿಸೆಂಬರ್ 27
"ಜನಗಣ ಮನ"ವನ್ನು ಭಾರತದ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಥಮ ಬಾರಿಗೆ 1911 ಡಿಸೆಂಬರ್ 27 ರಂದು ಹಾಡಲಾಯಿತು.
9) ಜನಗಣಮನವನ್ನು ರಾಷ್ಟ್ರಗೀತೆಯೆಂದು ಸಂವಿಧಾನ ರಚನಾ ಸಭೆಯು ಯಾವಾಗ ಅಂಗೀಕರಿಸಿತು?
A). ಜನವರಿ 26, 1950
B). ಜನವರಿ 24, 1950
C). ಆಗಸ್ಟ್ 15, 1947
D). ಆಗಸ್ಟ್ 14, 1947
Correct Ans: (B)
ಜನವರಿ 24, 1950
ಜನಗಣಮನವನ್ನು ರಾಷ್ಟ್ರಗೀತೆಯೆಂದು ಸಂವಿಧಾನ ರಚನಾ ಸಭೆಯು ಮತ್ತು ಭಾರತ ಸರ್ಕಾರವು ಜನವರಿ 24, 1950 ರಂದು ಅಂಗೀಕರಿಸಿತು.

10) "ಜನಗಣ ಮನ"ವನ್ನು ಯಾವ ಸಂದರ್ಭದಲ್ಲಿ ಮೊದಲು ಹಾಡಿದ್ದು?
A). ಕಾಂಗ್ರೆಸ್ ಅಧೀವೇಶನದಲ್ಲಿ
B). ಚಳುವಳಿಯಲ್ಲಿ
C). ಸಂಘ ಮತ್ತು ಸಂಸ್ಥೆಗಳಲ್ಲಿ
D). ಯಾವುದು ಅಲ್ಲ
Correct Ans: (A)
ಕಾಂಗ್ರೆಸ್ ಅಧೀವೇಶನದಲ್ಲಿ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಕಲ್ಕತ್ತಾ ಅಧಿವೇಶನದಲ್ಲಿ ದೊರೆ ಜಾರ್ಜ - 5ನ್ನು ಆಹ್ವಾನಿಸುವ ಸಂದರ್ಭದಲ್ಲಿ "ಜನಗಣ ಮನ"ವನ್ನು ಹಾಡಿದ್ದರು.
11) ಭಾರತದ ರಾಷ್ಟ್ರಗೀತೆ ’ ಜನಗಣಮನ’ವನ್ನು 1911 ರಲ್ಲಿ ಯಾರು ರಚಿಸಿದರು?
A). ಬಂಕಿಂ ಚಂದ್ರ ಚಟರ್ಜಿ
B). ರವೀಂದ್ರನಾಥ ಠಾಗೋರ್
C). ಶರತ್ ಚಂದ್ರ ಚಟರ್ಜಿ
D). ತಾರಾಶಂಕರ ಬಂಡೋಪಾಧ್ಯಯ
Correct Ans: (B)
ರವೀಂದ್ರನಾಥ ಠಾಗೋರ್
ಇಂಗ್ಲೆಂಡಿನ ದೊರೆ ಮತ್ತು ಭಾರತದ ಸಾಮ್ರಾಟನೆನಿಸಿದ ಐದನೇ ಚಾರ್ಜ (1910-1936) ಭಾರತಕ್ಕೆ 1911 ರ ಡಿಸೆಂಬರ್ ನಲ್ಲಿ ಭೇಟಿಕೊಟ್ಟನು. 1906 ರಲ್ಲಿ ವಿಭಜಿಸಲ್ಪಟ್ಟ ಪೂರ್ವ ಮತ್ತು ಪಶ್ಚಿಮ ಬಂಗಾಳ ಪ್ರಾಂತಗಳನ್ನು ಜಾರ್ಜನ ಆದೇಶದ ಮೇರೆಗೆ ಒಂದುಗೂಡಿಸಲಾಯಿತು. ಈ ಸಂದರ್ಭದಲ್ಲಿ ಕವಿ ರವೀಂದ್ರರು "ಜನಗಣ ಮನ"ವನ್ನು ರ

0 comments:

Post a Comment

 
Top