ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಮಸೂದೆ–2015’
⭐ ಇತ್ತೀಚಿನ ವರ್ಷಗಳಲ್ಲೇ ಇದು ಅತ್ಯಂತ ಸುದೀರ್ಘ ಮಸೂದೆ.
⭐ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ, ಅದಕ್ಕೆ ತಕ್ಕ ಸಂಬಳ ಮತ್ತು ಇತರ ಸವಲತ್ತುಗಳು ಸಿಗಲಿವೆ.
ಮಸೂದೆಯಲ್ಲಿನ ಪ್ರಮುಖ ಅಂಶಗಳು :
⭐ ಗ್ರಾಮಮಟ್ಟದಿಂದ ರಾಜ್ಯ ಮಟ್ಟದ ವರೆಗಿನ ಎಲ್ಲ ಯೋಜನೆಗಳನ್ನು ತಾಲ್ಲೂಕು ಹಾಗೂ ಜಿಲ್ಲಾ ಯೋಜನಾ ಸಮಿತಿಗಳ ಮೂಲಕವೇ ಅನುಷ್ಠಾನಕ್ಕೆ ತರಲಾಗುತ್ತದೆ.
⭐ ಜಿಲ್ಲಾ ಸಮಿತಿಗಳಿಂದ ಬಂದ ಪ್ರಸ್ತಾವಗಳಿಗೆ ಅನುಮೋದನೆ ನೀಡಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸ್ಥಾಪಿಸಲಾಗುತ್ತದೆ.
⭐ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಸಾಮಾನ್ಯ, ಸಾಮಾಜಿಕ ನ್ಯಾಯ ಹಾಗೂ ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿಗಳನ್ನು ಹೊಂದಲು ಅವಕಾಶ ಕಲ್ಪಿಸಲಾಗುತ್ತದೆ.
⭐ ಚುನಾಯಿತ ಸದಸ್ಯರು ಆಸ್ತಿ ಮತ್ತು ಹೊಣೆಗಾರಿಕೆಗಳ ಘೋಷಣೆ ಮಾಡುವುದು ಕಡ್ಡಾಯವಾಗಿದೆ.
🌟ಜನವಸತಿ ಸಭಾ🌟
⭐ ಗ್ರಾಮದ ಅಗತ್ಯಗಳಿಗೆ ತಕ್ಕಂತೆ ಯೋಜನೆ ರೂಪಿಸಲು ಜನವಸತಿ ಸಭಾ ಪರಿಕಲ್ಪನೆ ಪರಿಚಯ. ನಿರ್ಣಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.
⭐ ಜನವಸತಿ ಸಭಾಗಳು ಆರು ತಿಂಗಳಿಗೆ ಕನಿಷ್ಠ ಒಂದು ಸಲ ಸಭೆ ಸೇರಬೇಕು.
⭐ ಆಯಾ ಜನವಸತಿ ಪ್ರದೇಶವನ್ನು ಪ್ರತಿನಿಧಿಸುವ ವಾರ್ಡಿನ ಚುನಾಯಿತ ಸದಸ್ಯ ಆ ಸಭೆಯ ಅಧ್ಯಕ್ಷತೆಯನ್ನು ವಹಿಸಬೇಕು.(ಪ್ರವೀಣ ಹೆಳವರ)
⭐ ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ಒಂದರಷ್ಟು ಇಲ್ಲವೆ 20 ಸದಸ್ಯರು ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ಸಂಖ್ಯೆಯಲ್ಲಿ ಕೋರಂ ಇರಬೇಕು’
⭐ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವುದು, ನೈರ್ಮಲ್ಯ ಕಾಪಾಡಲು ಸಲಹೆ ನೀಡುವುದು, ವಸತಿ ಪ್ರದೇಶಕ್ಕೆ ಅಗತ್ಯವಾದ ಯೋಜನೆ ರೂಪಿಸುವುದು, ಬೀದಿದೀಪಗಳ ನಿರ್ವಹಣೆ, ನೀರಿನ ಪೂರೈಕೆ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುವುದು ಜನವಸತಿ ಸಭಾದ ಕರ್ತವ್ಯಗಳಾಗಿವೆ’
⬛⬛ಗ್ರಾಮ ಪಂಚಾಯಿತಿ ಕರ್ತವ್ಯಗಳು⬛⬛
➡ಪಂಚಾಯಿತಿ ಪ್ರದೇಶದ ವಾರ್ಷಿಕ ಯೋಜನೆ ಸಿದ್ಧಪಡಿಸುವುದು
➡ವಾರ್ಷಿಕ ಬಜೆಟ್ ಸಿದ್ಧಪಡಿಸುವುದು
➡ಪ್ರಕೃತಿ ವಿಕೋಪಗಳಿಗೆ ಪರಿಹಾರ ಒದಗಿಸುವುದು
➡ಸಾರ್ವಜನಿಕ ಸ್ವತ್ತುಗಳಲ್ಲಿನ ಅತಿಕ್ರಮಣ ತಡೆಯುವುದು
➡ಸಮುದಾಯ ಕಾರ್ಯಗಳಿಗೆ ವಂತಿಗೆ ನೀಡುವುದು
➡ಗ್ರಾಮಗಳ ಅತ್ಯಾವಶ್ಯಕ ಅಂಕಿಅಂಶ ಇಟ್ಟುಕೊಳ್ಳುವುದು
➡ಸಮಗ್ರ ಗ್ರಾಮ ಕೃಷಿ ಯೋಜನೆ ಸಿದ್ಧಪಡಿಸಿ, ಮೇಲ್ವಿಚಾರಣೆ ನಡೆಸುವುದು
➡ನರ್ಸರಿ ಸ್ಥಾಪಿಸುವುದು
➡ಮಣ್ಣು, ನೀರು ಮತ್ತು ಬೀಜಗಳ ಸಂರಕ್ಷಣೆಗೆ ಯೋಜನೆ ರೂಪಿಸುವುದJnanasele Praveenen
➡ಮಾರುಕಟ್ಟೆ ಧಾರಣೆ ಪ್ರದರ್ಶಿಸುವುದು
➡ಕೃಷಿವಿಮಾ ಯೋಜನೆಗಳ ಮೇಲ್ವಿಚಾರಣೆ ಮಾಡುವುದು
ಸಾಂಕ್ರಾಮಿಕ ರೋಗ ತಡೆಗಟ್ಟುವುದು
➡ಗ್ರಾಮೀಣ ಮೀನು ಮತ್ತು ಮಾಂಸದ ಮಾರುಕಟ್ಟೆ ಸ್ಥಾಪಿಸುವುದು
➡ಹುಲ್ಲುಗಾವಲು ಅಭಿವೃದ್ಧಿ ಮಾಡುವುದು
➡ಪ್ರವಾಸೋದ್ಯಮ ಚಟುವಟಿಕೆಗೆ ಉತ್ತೇಜನ ನೀಡುವುದು
➡ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಚಟುವಟಿಕೆಗೆ ಉತ್ತೇಜನ ನೀಡುವುದು
➡ಗ್ರಾಮೀಣ ವಸತಿ ಸಹಕಾರ ಸಂಘಗಳ ಸ್ಥಾಪನೆ
➡ನೀರು ಸರಬರಾಜು ಯೋಜನೆ ನಿರ್ವಹಣೆ
➡ಸ್ಮಶಾನಗಳ ವ್ಯವಸ್ಥೆ
➡ಭೂ, ಜಲ ಮಾರ್ಗ ನಿರ್ವಹಣೆ
➡ಪ್ರಾಥಮಿಕ ಶಾಲೆಗಳ ಮೇಲುಸ್ತುವಾರಿ ನೋಡುವುದು
➡ವಾಚನಾಲಯಗಳ ನಿರ್ವಹಣೆ
➡ಆಟದ ಮೈದಾನ ನಿರ್ಮಾಣ
➡ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು ಮತ್ತು ಜಾತ್ರೆಗಳನ್ನು ನಡೆಸುವುದು
➡ಎಸ್ಸಿ, ಎಸ್ಟಿ ಕಾಲೊನಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು
➡ಗ್ರಾಮದ ಇತಿಹಾಸ, ಸಂಸ್ಕೃತಿ, ಪರಂಪರೆಗಳ ದತ್ತಾಂಶ ಸಂಗ್ರಹ
➡ಒಟ್ಟು 30 ಇಲಾಖೆಗಳ ಹೊಣೆ ನಿರ್ವಹಣೆ
🌟◀ತಾಲ್ಲೂಕು ಪಂಚಾಯಿತಿ ಕರ್ತವ್ಯಗಳು▶🌟
➡ಎಲ್ಲ ಗ್ರಾಮಗಳ ವಾರ್ಷಿಕ ಯೋಜನೆ ಪರಿಶೀಲನೆ
➡ತಾಲ್ಲೂಕು ಬಜೆಟ್ ಸಿದ್ಧಪಡಿಸುವುದು
➡ಜಿಲ್ಲಾ ಪಂಚಾಯಿತಿ ವಹಿಸಿದ ಕಾರ್ಯ ಮಾಡುವುದು
➡ಕೀಟನಾಶಕ ಸಂಗ್ರಹ ಮಾಡುವುದು
➡ಉಗ್ರಾಣ ಹಾಗೂ ಶೈತ್ಯಾಗಾರದ ವ್ಯವಸ್ಥೆ
➡ಸಂಚಾರಿ ಪಶುವೈದ್ಯಕೀಯ ಚಿಕಿತ್ಸಾಲಯಗಳ ನಿರ್ವಹಣೆ
➡ತಾಲ್ಲೂಕಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಗಳ ದತ್ತಾಂಶ ಸಂಗ್ರಹ
◀🌟ಜಿಲ್ಲಾ ಪಂಚಾಯಿತಿ ಕರ್ತವ್ಯಗಳು🌟▶
➡ಜಿಲ್ಲಾಮಟ್ಟದ ಯೋಜನೆಗಳ ಉಸ್ತುವಾರಿ
➡ಗೋದಾಮುಗಳ ಸ್ಥಾಪನೆ
➡ಅಂತರ್ಜಲ ಹೆಚ್ಚಿಸಲು ಯೋಜನೆ ರೂಪಿಸುವುದು
➡ಉದ್ಯೋಗ ಮೇಳ ನಡೆಸುವುದು
➡ಯುವಜನ ಮೇಳ ಏರ್ಪಡಿಸುವುದು
➡ದನಗಳ ಪರಿಷೆ ನಡೆಸುವುದು
➡ಜಿಲ್ಲಾ ಅಂಕಿ–ಸಂಖ್ಯೆಗಳ ಸಂಗ್ರಹ ಮಾಡುವುದು


0 comments:

Post a Comment

 
Top