1) ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕೇರಳ ಸರ್ಕಾರ ಜಲ ಮೆಟ್ರೊ ರೈಲ್ವೆ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಈ ರೈಲು ಯಾವ ನಗರದಲ್ಲಿ ಸಂಚರಿಸಲಿದೆ?
a) ಕಾಸರಗೋಡು
b) ತಿರುವನಂತಪುರ
c) ಕೊಚ್ಚಿ ✔✔✔✔
d) ಕೊಟ್ಟಾಯಂ
2) ಜುಲೈ 28ರಂದು ನಿಧನರಾದ ಖ್ಯಾತ ಲೇಖಕಿ ಮಹಾಶ್ವೇತಾ ದೇವಿ ಅವರ ಪ್ರಸಿದ್ಧ ಬಂಗಾಳಿ ಕೃತಿ ಯಾವುದು?
a) ಶ್ರೀಕಂಠ
b) ಚಾಣಕ್ಯ ನೀತಿ
c) ದಿ ಪೋಸ್ಟ್‌ ಆಫೀಸ್‌
d)`ಹಜಾರ್ ಚೌರಾಶಿರ್ ಮಾ` (1084ರ ತಾಯಿ)✔✔✔✔
3) ಆಗಸ್ಟ್ 5 ರಿಂದ ಆರಂಭಗೊಳ್ಳಲಿರುವ ರಿಯೊ ಒಲಿಂಪಿಕ್ ಕ್ರೀಡಾಕೂಟ ಯಾವ ದೇಶದಲ್ಲಿ ನಡೆಯಲಿದೆ?
a) ಡೆನ್ಮಾರ್ಕ್
b) ಬ್ರೆಜಿಲ್✔✔✔✔
c) ಫ್ರಾನ್ಸ್
d) ಕೆನಡಾ
4) ಮಹಾದಾಯಿ ನೀರು ಹಂಚಿಕೆ ವಿವಾದವು ಈ ಕೆಳಕಂಡ ಯಾವ ರಾಜ್ಯಗಳ ಮಧ್ಯೆ ನಡೆಯುತ್ತಿದೆ?
a) ಗೋವಾ-ತಮಿಳುನಾಡು
b) ತೆಲಂಗಾಣ-ಮಹಾರಾಷ್ಟ್ರ
c) ಕನಾರ್ಟಕ-ಗೋವಾ✔✔✔✔
d) ತಮಿಳುನಾಡು-ಪುದುಚೇರಿ
5) ಜನಮತದ ಮೂಲಕ ಐರೋಪ್ಯ ಒಕ್ಕೂಟ (ಬ್ರೆಕ್ಸಿಟ್)ದಿಂದ ಹೊರ ನಡೆಯುವ ನಿರ್ಧಾರವನ್ನು ಇತ್ತೀಚೆಗೆ ಯಾವ ದೇಶ ಕೈಗೊಂಡಿತು?
a) ಇಟಲಿ
b) ಗ್ರೀಕ್
c) ಬ್ರಿಟನ್‌✔✔✔✔
d) ಆಸ್ಟ್ರೀಯ

6) 2016, ಜುಲೈ 24ರಂದು ಚೆಂಗ್ಡು ನಗರದಲ್ಲಿ ಜಿ-20 ದೇಶಗಳ ಹಣಕಾಸು ಸಚಿವರು ಮತ್ತು ಮುಖ್ಯಸ್ಥರ ಸಭೆ ನಡೆಯಿತು. ಚೆಂಗ್ಡು ನಗರ ಯಾವ ದೇಶದಲ್ಲಿದೆ?
a) ಚೀನಾ✔✔✔✔
b) ನೇಪಾಳ
c) ಥೈಲ್ಯಾಂಡ್
d) ಹಂಗೇರಿ
7) ಸ್ಮಾರ್ಟ್‌ಫೋನ್‌ನಲ್ಲಿ ಜಿಪಿಎಸ್ ಸೌಲಭ್ಯ ಮತ್ತು ಕ್ಯಾಮೆರ ಬಳಸಿಕೊಂಡು ಆಡುವ ಯಾವ ಗೇಮ್ ಇತ್ತೀಚೆಗೆ ವಿಶ್ವದಾದ್ಯಂತ ಜನಪ್ರಿಯಗೊಂಡಿದೆ ?
a) ಕ್ಯಾಂಡಿಕ್ರಶ್ ಸಾಗಾ
b) ಪೋಕಿಮಾನ್ ಗೋ ಗೇಮ್✔✔✔✔
c) ಕಾರ್ ರೇಸ್ ಗೇಮ್
d) ಬೈಕ್ ರೇಸ್ ಗೇಮ್
8) ಪ್ರಪಂಚ ಪರ್ಯಟನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಜಗತ್ತಿನ ಮೊಟ್ಟಮೊದಲ ಸೌರ ಚಾಲಿತ ವಿಮಾನ ಯಾವುದು?
a) ಬೋಯಿಂಗ್ ವಿಮಾನ
b) ಸೋಲಾರ್ ಇಂಪಲ್ಸ್-1
c) ಸೋಲಾರ್ ಇಂಪಲ್ಸ್-2✔✔✔✔
d) ಯಾವುದು ಅಲ್ಲ
9) ದೇಶದ ಬಹು ಬ್ರ್ಯಾಂಡ್ ಫ್ಯಾಷನ್ ಅಂತರ್ಜಾಲ ಮಳಿಗೆ (ಇ-ಕಾಮರ್ಸ್) ಜಬಾಂಗ್ ಅನ್ನು ಯಾವ ಕಂಪೆನಿ ಖರೀದಿಸಿದೆ?
a) ಅಮೆಜಾನ್
b) ಸ್ನ್ಯಾಪ್‌ಡೀಲ್‌
c) ಮಿಂತ್ರಾ✔✔✔✔
d) ಇ-ಕಾರ್ಟ್
10) ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನ ಹೈಕೋರ್ಟ್ ದೋಷ ಮುಕ್ತಗೊಳಿಸಿತು?
a) ಹಿಟ್ ಅಂಡ್ ರನ್
b) ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ
c) ಕೃಷ್ಣಮೃಗ ಬೇಟೆ✔✔✔✔
d) ಹಣ ದುರುಪಯೋಗ
11) 2016 ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ನಡೆದ ಏಳನೇ ಸಾರ್ಕ್ ದೇಶಗಳ ಗೃಹಸಚಿವರ ಸಮ್ಮೇಳನ ಯಾವ ದೇಶದಲ್ಲಿ ನಡೆಯಿತು?
a) ಭಾರತ
b) ಪಾಕಿಸ್ತಾನ✔✔✔✔
c) ಶ್ರೀಲಂಕಾ
d) ನೇಪಾಳ
12) ‘ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಯನ್ನು ಸಂವಿಧಾನದ ಎಷ್ಟನೇ ತಿದ್ದುಪಡಿ ಮೂಲಕ ಜಾರಿಗೆ ತರಲಾಗುವುದು?
a) 122ನೇ ತಿದ್ದುಪಡಿ✔✔✔✔
b) 123ನೇ ತಿದ್ದುಪಡಿ
c) 124ನೇ ತಿದ್ದುಪಡಿ
d) 125ನೇ ತಿದ್ದುಪಡಿ
13) ಇತ್ತೀಚೆಗೆ ತಮಿಳುನಾಡು ಸರ್ಕಾರ ಮದ್ರಾಸ್‌ ಹೈಕೋರ್ಟ್‌ಗೆ ಯಾವ ಹೆಸರನ್ನು ಮರು ನಾಮಕರಣ ಮಾಡಲು ನಿರ್ಣಯ ಕೈಗೊಂಡಿತು?
a) ಚೆನ್ನೈ ಹೈಕೋರ್ಟ್‌
b) ದ್ರಾವಿಡ ಹೈಕೋರ್ಟ್
c) ಅಮ್ಮ ಹೈಕೋರ್ಟ್‌
d)ತಮಿಳುನಾಡು ಹೈಕೋರ್ಟ್✔✔✔✔
14) 2016ರ ವೃತ್ತಿಪರ ಪ್ರೊ ಕಬಡ್ಡಿ ಪಂದ್ಯಾವಳಿಯ ನಾಲ್ಕನೇ ಆವೃತ್ತಿಯಲ್ಲಿ ಯಾವ ತಂಡ ಮೂರನೇ ಸ್ಥಾನವನ್ನು ಪಡೆಯಿತು?
a) ಜೈಪುರ ಪಿಂಕ್ ಪ್ಯಾಂಥರ್ಸ್
b) ಪಟ್ನಾ ಪೈರೇಟ್
c) ಪುಣೇರಿ ಪಲ್ಟನ್ಸ್✔✔✔✔
d) ತೆಲುಗು ಟೈಟಾನ್ಸ್
15) ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮೊದಲ ಪುಣ್ಯಸ್ಮರಣೆ ಅಂಗವಾಗಿ ಅವರ ಪುತ್ಥಳಿಯನ್ನು ಯಾವ ಸ್ಥಳದಲ್ಲಿ ಅನಾವರಣ ಮಾಡಲಾಗಿದೆ?
a) ರಾಮೇಶ್ವರಂ ✔✔✔✔
b) ಚೆನ್ನೈ
c)ಕೂಡಂಕುಲಂ
d) ನವದೆಹಲಿ

16) ಭಾರತ ಸರ್ಕಾರವು ಯಾವ ದಿನದಂದು ‘ಕಾರ್ಗಿಲ್ ವಿಜಯ ದಿನ’ವನ್ನು ಆಚರಿಸತ್ತದೆ?
a) ಜೂನ್ 26
b) ಜುಲೈ 26✔✔✔✔
c) ಆಗಸ್ಟ್ 26
d) ಸೆಪ್ಟೆಂಬರ್‌ 26
17) 2016ನೇ ಸಾಲಿನ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾಗಿರುವ ಬೆಜವಾಡ ವಿಲ್ಸನ್‌ ಮತ್ತು ಟಿ.ಎಂ ಕೃಷ್ಣ ಅವರು ಯಾವ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ?
a) ಸಫಾಯಿ ಕರ್ಮಚಾರಿ ಆಂದೋಲನ–ಸಂಗೀತ✔✔✔✔
b) ಚಿತ್ರಕಲೆ–ಪರಿಸರ
c) ಶೌಚಾಲಯ–ಕೃಷಿ
d) ಸಾಹಿತ್ಯ–ವಿಜ್ಞಾನ
18) ಭಾರತದಲ್ಲಿ ಹಾಕಿ ಮಾಂತ್ರಿಕ ಎಂದೇ ಹೆಸರಾಗಿದ್ದ ಜನಪ್ರಿಯ ಹಿರಿಯ ಹಾಕಿ ಆಟಗಾರರೊಬ್ಬರು ಇತ್ತೀಚೆಗೆ ನಿಧನರಾದರು. ಅವರು ಯಾರು?
a) ದ್ಯಾನ್‌ ಚಂದ್‌
b) ಜೈಪಾಲ್ ಸಿಂಗ್
c) ಅನಿತಾ ರಾಮಸ್ವಾಮಿ
d)ಮೊಹಮ್ಮದ್ ಶಾಹಿದ್✔✔✔✔
19) ಇತ್ತೀಚೆಗೆ ಆಸ್ಟ್ರೇಲಿಯಾ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಯಾರು 29ನೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ?
a) ಮಾಲ್ಕಮ್‌ ಟರ್ನ್‌ಬುಲ್‌✔✔✔✔
b) ಟೋನಿ ಅಬಾಟ್‌
c) ಕೆನೆಲಿಯಾ ವಿವಿಕ್ಸಿ
d) ಬಿಲ್‌ ಶಾರ್ಟನ್‌
20) ಅಸ್ಸಾಂ ರಣಜಿ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ಆಗಿ ನೇಮಕಗೊಂಡಿರುವ ಕನ್ನಡದ ಮಾಜಿ ಕ್ರಿಕೆಟ್‌ ಆಟಗಾರ ಯಾರು?
a) ಜಾವಗಲ್ ಶ್ರೀನಾಥ್
b) ವೆಂಕಟೇಶ್ ಪ್ರಸಾದ್
c) ಸುನೀಲ್ ಜೋಶಿ✔✔✔✔
d) ದೊಡ್ಡ ಗಣೇಶ್‌

0 comments:

Post a Comment

 
Top