ಕಂಪ್ಯೂಟರ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
1. ಕಂಪ್ಯೂಟರ ( ಗಣಕಯಂತ್ರ ) ದ ಜನಕ .........
A). ಜಾನ ನೇಪಿಯರ್
B). ಬೆಲ್ಸ್ ಪಾಸ್ಕಲ್
C). ಚಾಲ್ಸ್೯ ಬ್ಯಾಬೇಜ್
D). ಜಾನ್ ವಾನ್ ನ್ಯೂಮನ್
Correct ans:
ಚಾಲ್ಸ್೯ ಬ್ಯಾಬೇಜ್
ಬ್ರಿಟನ್ ದೇಶದ ಚಾಲ್ಸ್೯ ಬ್ಯಾಬೇಜ್ ರವರು 1824 ರಲ್ಲಿ ಕಂಪ್ಯೂಟರ ( ಗಣಕಯಂತ್ರ ) ವನ್ನು ಕಂಡು ಹಿಡಿದರು.
2.) ಕಂಪ್ಯೂಟರ್ ಒಂದು .............
A). ವಿದ್ಯುನ್ಮಾನ ಸಾಧನ
B). ಕಾಂತೀಯ ಸಾಧನ
C). ವಿದ್ಯುತ್ತೀಯ ಸಾಧನ ಯಾವುದು ಅಲ್ಲ
D). ಯಾವುದು ಅಲ್ಲ
Correct Ans:
ವಿದ್ಯುನ್ಮಾನ ಸಾಧನ
ಕಂಪ್ಯೂಟರ್ ನ್ನು 1824 ರಲ್ಲಿ ಬ್ರಿಟನ್ನಿನ ಚಾಲ್ಸ್೯ ಬ್ಯಾಬೆಜ್ ರವರು ಕಂಡು ಹಿಡಿದರು.
3.) ಆರ್.ಒ.ಎಮ್. ದ ವಿಸ್ತರಣಾ ರೂಪ ಏನು ?
A). ರೌಂಡ ಓನ್ಲಿ ಮೆಮರಿ
B). ರೀಡ್ ಓನ್ಲಿ ಮೆಮರಿ
C). ರಾಂಡಮ್ ಆಪರೇಟ ಮೆಮರಿ
D). ಯಾವುದು ಅಲ್ಲ
Correct Ans: (B)
ರೀಡ್ ಓನ್ಲಿ ಮೆಮರಿ
ROM ಎನ್ನುವುದು ಕಂಪ್ಯೂಟರ್ ಗಳಲ್ಲಿ ಬಳಸುವ ಒಂದು ಬಗೆಯ ಶಾಶ್ವತ ಅಥವಾ ಆವಿಯಾಗದ ಪ್ರಾಥಮಿಕ ಸ್ಮರಣ ಸಾಧನ. ಇದು ಮಾಹಿತಿಯನ್ನು ಶಾಶ್ವತವಾಗಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಅಂದರೆ ಇದರಲ್ಲಿ ಸಂಗ್ರಹವಾಗಿರುವ ಮಾಹಿತಿ ಕಂಪ್ಯೂಟರ್ ಗಳನ್ನು ಬಂದ್ ಮಾಡಿದಾಗ ಅಥವಾ ವಿದ್ಯುತ್ ಕಡಿತಗೊಂಡಾಗ ಅಳಿಸಿ ಹೋಗುವುದಿಲ್ಲ.
4.) ಗುಂಪಿಗೆ ಸೇರದ ಪದವನ್ನು ಗುರುತಿಸಿ
A). ಮೌಸ್
B). ಪ್ರದಶ೯ಕ
C). ಮುದ್ರಕ
D). ಸ್ಪೀಕರ್
Correct Ans: (A)
ಮೌಸ್
ಮೌಸ್ ಇದು ದತ್ತಾಂಶ ಸ್ವೀಕಾರ (Input )ಸಾಧನವಾಗಿದೆ. ಇದರ ಮೂಲಕ ಕಂಪ್ಯೂಟರ್ ಬಳಸುವವರು ತುಂಬಾ ಸರಳವಾಗಿ ಕಂಪ್ಯೂಟರ್ ಗಳಿಗೆ ಕಾಯ೯ ಸೂಚನೆಗಳನ್ನು ನೀಡಬಹುದು.
ಮೌಸನಲ್ಲಿ ಎರಡು ವಿಧಗಳಿವೆ
1) ಯಾಂತ್ರಿಕ ಮೌಸ್ 2) ದ್ಯುತಿ ಮೌಸ್
5.) ಗುಂಪಿಗೆ ಸೇರದ ಮುದ್ರಕವನ್ನು ಆರಿಸಿ
A). ಲೈನ್ ಪ್ರಿಂಟರ್
B). ಡಾಟ್ ಮ್ಯಾಟ್ರಿಕ್ಸ ಪ್ರಿಂಟರ್
C). ಡ್ರಮ್ ಪ್ರಿಂಟರ್
D). ಲೇಸರ ಪ್ರಿಂಟರ್
Correct ans:
ಲೇಸರ ಪ್ರಿಂಟರ್
ಚುಂಬಕ ಮುದ್ರಕಗಳು (Impact Printer) : ಉದಾ: ಚೈನ್ ಪ್ರಿಂಟರ್, ಡಾಟ್ ಮ್ಯಾಟ್ರಿಕ್ಸ ಪ್ರಿಂಟರ್, ಡ್ರಮ್ ಪ್ರಿಂಟರ್
ಅಚುಂಬಕ ಮುದ್ರಕಗಳು(Non-Impact Printer): ಉದಾ: ಇಂಕ್ ಜೆಟ್ ಮುದ್ರಕ, ಲೇಸರ ಮುದ್ರಕ, ಥಮ೯ಲ್ ಮುದ್ರಕ
6.) ಗುಂಪಿಗೆ ಸೇರದ ಪದವನ್ನು ಗುರುತಿಸಿ .
A). ಆರ್.ಪಿ.ಎ.ಅಮ್
B). ಆರ್.ಓ.ಎಮ್
C). ಹಾಡ೯ಡಿಸ್ಕ
D). ಫ್ಲಾಪಿ ಡಿಸ್ಕ
Correct Ans:
ಫ್ಲಾಪಿ ಡಿಸ್ಕ
ಫ್ಲಾಪಿ ಡಿಸ್ಕ – ಇದನ್ನು ಕಾಂತಿಯ ತಟ್ಟೆ ಎಂದು ಕರೆಯಬಹುದು ವೃತ್ತಾಕಾರದ ಮೃದುವಾದ ಪ್ಲಾಸ್ಟಿಕ್ ಹಾಳೆಯ ಎರಡು ಬದಿಗೆ ಮ್ಯಾಗ್ನೆಟಿಕ್ ಆಕ್ಸೈಡ್ ಲೇಪಿಸಿರುತ್ತಾರೆ. ಇಂತಹ ಪ್ಲಾಪಿಗಳು 2 ತರಹ ಕಂಡು ಬರುತ್ತವೆ
1) 5.25(5 ¼) ಅಂಗುಲ(inch) ವ್ಯಾಸದ(diameter)
360 KB(ಕಿಲೋ ಬೈಟ್), 720 KB(ಕಿಲೋ ಬೈಟ್), 1.2 MB(ಮೆಗಾ ಬೈಟ್) ಸಂಗ್ರಹಣಾ ಸಾಮಥ್ಯ೯ದ ಪ್ಲಾಪಿ ತಟ್ಟೆಗಳು
2) 3.5”(3 ½ ) ಅಂಗುಲ(inch) ವ್ಯಾಸದ(diameter)
1.44MB (ಮೆಗಾ ಬೈಟ್) ಸಂಗ್ರಹಣಾ ಸಾಮಥ್ಯ೯ದ ಪ್ಲಾಪಿ ತಟ್ಟೆಗಳು
7.) …………… ಇದು ಬಹುಮಾಧ್ಯಮ ಸಲಕರಣಿ ಅಲ್ಲ .
A). ಗ್ರಾಫಿಕ್ಸ
B). ಧ್ವನಿ
C). ಕಾಗದ
D). ಪಠ್ಯ
Correct Ans: (A)
ಗ್ರಾಫಿಕ್ಸ
8) ...………….. ಇದು ಒಂದು ಪದ ಸಂಸ್ಕಾರಕ ಅಲ್ಲ
A). ಎಮ್.ಎಸ್.ವಡ೯
B). ನೋಟ ಪ್ಯಾಡ
C). ಎಮ್.ಎಸ್,ಎಕ್ಸಲ್
D). ಎಮ್.ಎಸ್.ಪಾವರಪಾಯಿಂಟ
Correct Ans: (D)
ಎಮ್.ಎಸ್.ಪಾವರಪಾಯಿಂಟ
ಪವರ್ ಪಾಯಿಂಟ್ ಎನ್ನುವುದು ಕಂಪ್ಯೂಟರ್ ಬಳಸುವವರಿಗೆ ತಾವು ನೀಡಬೇಕಾದ ಉಪನ್ಯಾಸ, ಭಾಷಣ ಇತ್ಯಾದಿಗಳಿಗೆ ಸಂಬಂಧಿಸಿದ ಮುಖ್ಯಾಂಶಗಳನ್ನು ವ್ಯವಸ್ಥಿತವಾಗಿ ಮತ್ತು ಪ್ರದಶ೯ನ ಯೋಗ್ಯವಾಗಿ ಜೋಡಿಸಲಾಗಿರುವ ಸ್ಲೈಡುಗಳು, ಟಿಪ್ಪಣಿಗಳು, ಪ್ರೇಕ್ಷಕರಿಗೆ ಹಂಚಬಹುದಾದ ಲಿಖಿತ ಸಾರಾಂಶಗಳಿರುವ ಕರಪತ್ರಗಳು, ಇತ್ಯಾದಿಗಳನ್ನು ಸಿದ್ದಪಡಿಸಲು ನೆರವಾಗುವ ಒಂದು ತಂತ್ರಾಂಶ ಪ್ರೋಗ್ರಾಂ ಆಗಿದೆ.
9.) ಮೈ ಕಂಪ್ಯೂಟರನಲ್ಲಿ ಇರಲಾರದ ಪ್ರತಿಮೆ ಯಾವುದು ?
A). ಸಿಡಿ ರೋಮ್ ಡ್ರೈವ
B). ೩.೫” ಫ್ಲಾಪಿ ಡ್ರೈವ
C). ಹಾಡ೯ಡಿಸ್ಕ
D). ಪೆನ್ ಡ್ರೈವ್
Correct Ans:C
ಹಾಡ೯ಡಿಸ್ಕ
ಹಾಡ೯ಡಿಸ್ಕಗಳು ಅಲ್ಯೂಮಿನಿಯಂನಂತಹ ಗಟ್ಟಿಯಾದ ಲೋಹದಿಂದ ತಯಾರಿಸಲಾದ ಚಪ್ಪಟೆ ತಟ್ಟೆಯಂತಹ ಸಾಧನಗಳು.ಇವುಗಳು ಫ್ಲಾಪಿ ಡಿಸ್ಕನಂತೆ ನಮ್ಯವಾಗಿರದೆ, ಗಡುಸಾಗಿರುವ ಕಾರಣ ಇವುಗಳಿಗೆ ಈ ಹೆಸರು ಬಂದಿದೆ.
ಹಾಡ್೯ಡಿಸ್ಕಗಳಲ್ಲಿ ಮೂರು ಮುಖ್ಯ ಉಪವಿಧಗಳನ್ನು ಗುರುತಿಸಬಹುದು
1)ಜಿಪ್ ಡಿಸ್ಕ್ ಅಥವಾ ಬೆನಾ೯ಕೆಲಿ ಡಿಸ್ಕ್ ಗಳು
2)ಡಿಸ್ಕ್ ಪ್ಯಾಕ್
3)ವಿಂಚೆಸ್ಟರ್ ಡಿಸ್ಕ್ ಗಳು
10.) ಕಂಪ್ಯೂಟರನ ಬೆನ್ನೆಲಬು ............
A). ಕೇಂದ್ರೀಯ ಸಂಸ್ಕರಣಾ ಘಟಕ
B). ಮದರ್ ಬೋಡ೯
C). ಕೀಲಿಮಣಿ
D). ಪ್ರದಶ೯ಕ
Correct Ans: (B)
ಮದರ್ ಬೋಡ೯
ಮದರ್ ಬೋಡ್೯ ಎನ್ನುವುದು ಕಂಪ್ಯೂಟರ್ ಗಳ ಒಂದು ಅಥವಾ ಹೆಚ್ಚಿನ ಸಂಖ್ಯೆಯ ಸೂಕ್ಷ್ಮ ಸಂಸ್ಕಾರಕಗಳನ್ನು ಜೋಡಿಸಿಡಲಾಗಿರುವ ದೃಡವಾದ, ಆಯತಾಕಾರದ ಒಂದು ಬೋಡು೯ ಅಥವಾ ಹಲಗೆಯಂತಹ ಸಾಧನ. ಸೂಕ್ಷ್ಮ ಸಂಸ್ಕಾರಕಗಳನ್ನು ಇನ್ನಿತರ ಯಂತ್ರಾಂಶಗಳಾದ ಸ್ಮರಣೆ ಅಥವಾ ಸ್ಮೃತಿ ಬಿಲ್ಲೆಗಳು, ಧ್ವನಿ ಮತ್ತು ದೃಶ್ಯ ಕಾಡ್೯ಗಳು, ಮಾಡೆಮ್ ಗಳು ಮೊದಲಾದ ಸಾಧನಗಳೊಂದಿಗೆ ಸಂಪಕಿ೯ಸುವ ಸಕೀ೯ಟ್ ಗಳು ಕೂಡಾ ಮಾತೃ ಬೋಡ್೯ ನಲ್ಲಿರುತ್ತವೆ 

0 comments:

Post a Comment

 
Top