ಪ್ರಕರಣ ಸಂಖ್ಯೆ - 158 : ಜಿಲ್ಲಾ ಪಂಚಾಯಿತಿಯ ಸ್ಥಾಪನೆ ಮತ್ತು ಅದರ ನಿಗಮನ
1) ಪ್ರತಿಯೊಂದು ಜಿಲ್ಲೆಗೆ, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ರಚಿಸಿದ ಚಿಕ್ಕನಗರ ಪ್ರದೇಶದಲ್ಲಿ ಸೇರ್ಪಡೆಯಾದ ಅಥವಾ ಮುನಿಸಿಫಲ್ ಕಾರ್ಪೋರೇಷನ್, ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪ ನಗರದ ಪ್ರಾಧಿಕಾರದ ಅಡಿಯಲ್ಲಿ ಇರುವ ಜಿಲ್ಲೆಯ ಅಂಥ ಭಾಗಗಳನ್ನು ಹೊರತುಪಡಿಸಿ ಇಡೀ ಜಿಲ್ಲೆಯ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಒಂದು ಜಿಲ್ಲಾ ಪಂಚಾಯಿತಿಯನ್ನು ರಚಿಸತಕ್ಕದ್ದು.
2) # ಪ್ರತಿಯೊಂದು ಜಿಲ್ಲಾ ಪಂಚಾಯಿತಿಯು "...... ಜಿಲ್ಲಾ ಪಂಚಾಯಿತಿ" ಎಂಬ ಹೆಸರಿನ ನಿಗಮಿತ ನಿಕಾಯವಾಗಿರತಕ್ಕದ್ದು.
# ಅದು ಶಾಶ್ವತ ಉತ್ತರಾಧಿಕಾರ ಮತ್ತು ಸಾಮಾನ್ಯ ಮೊಹರನ್ನು ಹೊಂದಿರತಕ್ಕದ್ದು ಮತ್ತು
# ಈ ಅಧಿನಿಯಮಿತಿ ಅಥವಾ ಯಾವುದೇ ಇತರ ಅಧಿನಿಯಮಿತಿಯ ಮೂಲಕ ಅಥವಾ ಸದರ ಅಡಿಯಲ್ಲಿ ವಿಧಿಸಿರುವಂಥ ನಿರ್ಬಂಧಗಳಿಗೆ ಒಳಪಟ್ಟು ತನ್ನ ನಿಗಮಿತ ಹೆಸರಿನಲ್ಲಿ ದಾವೆ ಹೂಡುವ ಅಥವಾ ದಾವೆಗೆ ಗುರಿಯಾಗುವ, ಅದು ಅಧಿಕಾರ ವ್ಯಾಪ್ತಿಯನ್ನು ಹೊಂದಿರುವಂಥ ಪ್ರದೇಶದ ಪರಿಮಿತಿಗಳೊಳಗೆ ಆಗಲಿ ಅಥವಾ ಕರಾರುಗಳನ್ನು ಮಾಡಿಕೊಳ್ಳುವ ಮತ್ತು ಅದನ್ನು ರಚಿಸಲಾಗಿರುವಂಥ ಉದ್ದೇಶಗಳಿಗೆ ಅವಶ್ಯವಾದ, ಸರಿ ಕಂಡ ಅಥವಾ ವಿಹಿತವಾದ ಎಲ್ಲಾ ಕಾರ್ಯಗಳನ್ನು ಮಾಡುವ ಸಾಮರ್ಥ್ಯವು ಅದರಲ್ಲಿ ನಿಹಿತವಾಗಿರತ್ಕದ್ದು.
ಪ್ರ.ಸಂ.-159 : ಜಿಲ್ಲಾ ಪಂಚಾಯಿತಿಯ ರಚನೆ
1) ಪ್ರತಿಯೊಂದು ಜಿಲ್ಲಾ ಪಂಚಾಯಿತಿಯು :
# 160ನೇ ಪ್ರಕರಣದ ಅಡಿಯಲ್ಲಿ ನಿರ್ಧರಿಸುವಂತೆ ಚುನಾಯಿತ ಸದಸ್ಯರನ್ನು ಒಳಗೊಂಡಿರತಕ್ಕದ್ದು.
# ಲೋಕಸಭೆಯ ಮತ್ತು ರಾಜ್ಯ ವಿಧಾನ ಸಭೆಯ ಯಾವ ಸದಸ್ಯರ ಚುನಾವಣೆ ಕ್ಷೇತ್ರಗಳು ಜಿಲ್ಲೆಯ ವ್ಯಾಪ್ತಿಯೊಳಗೆ ಇರುವುವೋ ಅಂಥ ಜಿಲ್ಲೆಯ ಒಂದು ಭಾಗವನ್ನು ಅಥವಾ ಸಮಗ್ರ ಜಿಲ್ಲೆಯನ್ನು ಪ್ರತಿನಿಧಿಸುವ ಸದಸ್ಯರನ್ನು ಒಳಗೊಂಡಿರತಕ್ಕದ್ದು.
# ಜಿಲ್ಲೆಯ ವ್ಯಾಪ್ತಿಯೊಳಗೆ ಮತದಾರರೆಂದು ನೊಂದಾಯಿತರಾದ ರಾಜ್ಯಸಭೆಯ ಸದಸ್ಯರನ್ನು ಮತ್ತು ರಾಜ್ಯ ವಿಧಾನಪರಿಷತ್ತಿನ ಸದಸ್ಯರನ್ನ ಒಳಗೊಂಡಿರತಕ್ಕದ್ದು. ಮತ್ತು
# ಜಿಲ್ಲೆಯ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರನ್ನು ಒಳಗೊಂಡಿರತಕ್ಕದ್ದು.
2) ಲೋಕಸಭೆಯ, ರಾಜ್ಯ ವಿಧಾನ ಸಭೆಯ, ರಾಜ್ಯ ಸಭೆಯ ಮತ್ತು ವಿಧಾನ ಪರಿಷತ್ತಿನ ಸದಸ್ಯರುಗಳು ಮತ್ತು ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರುಗಳು, 177ನೇ ಪ್ರಕರಣದ ಅಡಿಯಲ್ಲಿ ಅಧ್ಯಕ್ಷರುಗಳನ್ನು ಮತ್ತು ಉಪಾಧ್ಯಕ್ಷರುಗಳನ್ನು ಚುನಾಯಿಸುವ ಅಥವಾ 179ನೇ ಪ್ರಕರಣದಡಿ ಅವಿಶ್ವಾಸ ನಿರ್ಣಯಗಳನ್ನು ಪರಿಶೀಲಿಸುವ ಉದ್ದೇಶಕ್ಕಾಗಿ ಕರೆದ ವಿಶೇಷ ಸಭೆಗಳನ್ನು ಹೊರತು ಪಡಿಸಿ, ಜಿಲ್ಲಾ ಪಂಚಾಯಿತಿಯ ಯಾವುದೇ ಸಭೆಗಳ ವ್ಯವಹರಣೆಗಳಲ್ಲಿ ಭಾಗವಹಿಸಲು ಮತ್ತು ಮತ ನೀಡಲು ಹಕ್ಕುಳ್ಳವರಾಗಿರತಕ್ಕದ್ದು

0 comments:

Post a Comment

 
Top