ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷನ ಮತ್ತು ಉಪಾಧ್ಯಕ್ಷನ ಪ್ರಕಾರ್ಯಗಳು, ಕರ್ತವ್ಯಗಳು ಮತ್ತು ಅಧಿಕಾರಗಳು
ಪ್ರ.ಸಂ.-149 : ಸ್ಥಾಯಿ ಸಮಿತಿಗಳ ಪ್ರಕಾರ್ಯಗಳು
1) ಸಾಮಾನ್ಯ ಸ್ಥಾಯಿ ಸಮಿತಿ :-
ಸಾಮಾನ್ಯ ಸ್ಥಾಯಿ ಸಮಿತಿ ಸಿಬ್ಬಂದಿ ವಿಷಯಗಳು, ಸಂಪರ್ಕಗಳು, ಕಟ್ಟಡಗಳು, ಗ್ರಾಮೀಣ ಗೃಹ ನಿರ್ಮಾಣ, ಗ್ರಾಮ ವಿಸ್ತರಣೆ, ಪ್ರಕೃತಿ ವಿಕೋಪಗಳಿಗಾಗಿ ಪರಿಹಾರ ಹಾಗೂ ಸಂಬಂಧಪಟ್ಟ ವಿಷಯಗಳ ಮತ್ತು ಉಳಿದ ಎಲ್ಲಾ ಸಂಕೀರ್ಣ ವಿಷಯಗಳಿಗೆ ಸಂಬಂಧಪಟ್ಟ ಕಾರ್ಯಗಳನ್ನು ನೆರವೇರಿಸತಕ್ಕದ್ದು.
2) ಹಣಕಾಸು, ಲೆಕ್ಕಪರಿಶೋಧನಾ ಮತ್ತು ಯೋಜನಾ ಸಮಿತಿ :-
ಅ) ತಾಲ್ಲೂಕು ಪಂಚಾಯಿತಿಯ ಹಣಕಾಸು ಬಜೆಟ್ ರೂಪಿಸುವುದು, ಆದಾಯ ಹೆಚ್ಚಿಸುವುದಕ್ಕಾಗಿ ಪ್ರಸ್ತಾವಗಳ ಪರಿಶೀಲನೆ ಮತ್ತು ಜಮೆ ಹಾಗೂ ಖರ್ಚುಗಳ ವಿವರ ಪತ್ರಗಳ ಪರಿಶೀಲನೆ, ತಾಲ್ಲೂಕು ಪಂಚಾಯಿತಿಯು ಹಣಕಾಸಿನ ಮೇಲೆ ಪ್ರಭಾವವನ್ನು ಬೀರುವ ಎಲ್ಲ ಪ್ರಸ್ತಾವಗಳ ಪರ್ಯಾಲೋಚನೆ ಮತ್ತು ತಾಲ್ಲೂಕು ಪಂಚಾಯಿತಿಯ ಆದಾಯ ಮತ್ತು ವೆಚ್ಚದ ಸಾಮಾನ್ಯ ಮೇಲ್ವಿಚಾರಣೆ ಮತ್ತು ಸಹಕಾರ, ಸಣ್ಣ ಉಳಿತಾಯ ಮತ್ತು ತಾಲ್ಲೂಕಿನ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಇತರ ಯಾವುದೇ ಕಾರ್ಯಗಳನ್ನು ನೆರವೇರಿಸತಕ್ಕದ್ದು.
3) ಸಾಮಾಜಿಕ ನ್ಯಾಯ ಸಮಿತಿ :-
ಅ) ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳು ಮತ್ತು ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಇತರ ಹಿತಾಸಕ್ತಿಗಳ ಸಂವರ್ಧನೆ ಮತ್ತು ಏಳಿಗೆ ಇವುಗಳ ಬಗ್ಗೆ ಗಮನ ಹರಿಸಬೇಕು.
ಆ) ಸಾಮಾಜಿಕ ಅನ್ಯಾಯ ಹಾಗೂ ಎಲ್ಲ ರೀತಿಯ ಶೋಷಣೆಯಿಂದ ಅವರನ್ನು ಸಂರಕ್ಷಿಸುವುದು.
ಇ) ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳಿಗೆ ಮಹಿಳೆಯರಿಗೆ ಮತ್ತು ಸಮಾಜದ ಇತರ ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವುದು.
4) ಸ್ಥಾಯಿ ಸಮಿತಿಯು, ತಾಲ್ಲೂಕು ಪಂಚಾಯಿತಿಯು ಅವುಗಳಿಗೆ ವಹಿಸಿಕೊಟ್ಟಿರುವ ಅಧಿಕಾರಗಳಷ್ಟು ಮಟ್ಟಿಗೆ ಮೇಲೆ ಉಲ್ಲೇಖಿಸಿರುವ ಪ್ರಕಾರ್ಯಗಳನ್ನು ನೇರವೇರಿಸಬೇಕು.
ಪ್ರ.ಸಂ.-150 : ಸಮಿತಿಗಳ ಕಾರ್ಯವಿಧಾನ
1) ತಾಲ್ಲೂಕು ಪಂಚಾಯಿತಿಯು ಸಮಿತಿಗಳ ಸದಸ್ಯರ ಚುನಾವಣೆ, ಅವುಗಳ ಕಾರ್ಯಕಲಾಪಗಳ ನಿರ್ವಹಣೆ ಮತ್ತು ಅವುಗಳಿಗೆ ಸಂಬಂಧಪಟ್ಟ ಎಲ್ಲ ಇತರ ವಿಷಯಗಳಿಗೆ ಸಂಬಂಧಪಟ್ಟ ವಿನಿಮಯಗಳನ್ನು ರಚಿಸಬಹುದು.
2) ಪ್ರತಿಯೊಂದು ಸಮಿತಿಯ ಅಧ್ಯಕ್ಷನು, ಆ ಸಮಿತಿಯ ಕೆಲಸಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯಿತಿಯ ಕಛೇರಿಯಿಂದ ಯಾವುದೇ ಮಾಹಿತಿ, ವಿವರಣಾ ಪಟ್ಟಿ, ವಿವರ ಪತ್ರ, ಅಥವಾ ವರದಿಯನ್ನು ತರಿಸಿಕೊಳ್ಳಲು ಮತ್ತು ತಾಲ್ಲೂಕು ಪಂಚಾಯಿತಿಯ ಯಾವುದೇ ಸ್ಥಿರಸ್ವತ್ತನ್ನು ಅಥವಾ ಸಮಿತಿಯ ಕೆಲಸಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾಮಗಾರಿಯನ್ನು ಪ್ರವೇಶಿಸಲು ಮತ್ತು ಅದನ್ನು ಪರಿಶೀಲಿಸಲು ಹಕ್ಕುಳ್ಳವನಾಗಿರತಕ್ಕದ್ದು.
3) # ಪ್ರತಿಯೊಂದು ಸಮಿತಿಯು, ಸಮಿತಿಯ ಕೆಲಸಕ್ಕೆ ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿಯ ಯಾವನೇ ಅಧಿಕಾರಿಯು ಅದರ ಸಭೆಗಳಲ್ಲಿ ಹಾಜರಿರುವಂತೆ ಅಗತ್ಯಪಡಿಸಲು ಹಕ್ಕಳ್ಳದ್ದಾಗಿರತಕ್ಕದ್ದು.
# ಕಾರ್ಯದರ್ಶಿಯು ಸಮಿತಿಯ ಸೂಚನೆಯ ಮೇರೆಗೆ ನೋಟಿಸ್ಸುಗಳನ್ನು ಕೊಡತಕ್ಕದ್ದು ಮತ್ತು ಆ ಅಧಿಕಾರಿಯು ಹಾಜರಾಗುವಂತೆ ನೋಡಿಕೊಳ್ಳತಕ್ಕದ್ದು.

0 comments:

Post a Comment

 
Top